Image credit: Wildlife Conservation Group

This project aims to address pressing issues around urban commons by involving communities and children in the conservation and study of our ecosystems in the peri-urban areas of Bengaluru.

Commons are crucial components of ecosystems, serving as vital reservoirs of biodiversity and playing a significant role in groundwater replenishment. They provide essential resources such as food and fodder for various organisms, and contribute to micro-climate regulation.

In peri-urban Bangalore, however, commons have been under threat due to neglect and indifference. Waste from the rapidly expanding metropolis is being indiscriminately dumped in these areas, while lakes and Gomalaa grazing lands are being surreptitiously acquired by landsharks. The absence of dedicated caretakers has led to lakes becoming overgrown with weeds and falling into disrepair. As urbanization continues to encroach on these spaces, the pressure on them intensifies. Education and awareness campaigns can help sensitize these stakeholders to the importance of commons and their preservation.

We at the Wildlife Conservation Group (WCG) and Ramakrishna Mission, Shivanahalli, have been actively working in conserving the commons around the Bannerghatta National Park for a number of years now.

The primary objective of this project is to map the various common resources in the region, foster awareness and appreciation of commons among children, youths and other local actors. By encouraging them to reconnect with their local biodiversity and understand the importance of conserving commons, the project aims to empower the local community to take an active role in protecting these vital resources.

ಕಾಮನ್ಸ್ ಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಜೀವವೈವಿಧ್ಯತೆಯ ಸಮೃದ್ಧ ಭಂಡಾರಗಳಾಗಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ, ಹಲವಾರು ಜೀವಿಗಳಿಗೆ ಆಹಾರ ಮತ್ತು ಮೇವಿನ ಮೂಲವಾಗಿಯೂ ಮತ್ತು ಸೂಕ್ಷ್ಮ ಹವಾಮಾನ ನಿಯಂತ್ರಣದ ಕೆಲಸದಲ್ಲಿ ಬಹಳ ಮುಖ್ಯವಾಗಿವೆ.

ನಿರ್ಲಕ್ಷ್ಯ ಮತ್ತು ನಿರಾಸಕ್ತಿಯಿಂದಾಗಿ ಕಾಮನ್ಸ್ ಗಳು ಕ್ಷೀಣಿಸುತ್ತಿವೆ. ಬೆಂಗಳೂರಿನಂತಹ ಮಹಾನಗರದಿಂದ ತ್ಯಾಜ್ಯವನ್ನು ಕಾಮನ್ಸ್ ಪ್ರದೇಶಗಳಲ್ಲಿ ಸುರಿಯಲಾಗುತ್ತಿದೆ. ಭೂ ದಣಿಗಳಿಂದ ಸದ್ದಿಲ್ಲದ್ದೇ ಕೆರೆ – ಕುಂಟೆ, ಗೋಮಾಳ ಪ್ರದೇಶವನ್ನು ಕಬಳಿಸುವ ಸಂಚು ನಡೆಯುತ್ತಲೇ ಇದೆ. ಇನ್ನು ವಾರಸುದಾರರು ಇಲ್ಲದ ಕೆರೆಗಳು, ಕಳೆಗಳಿಂದ ತುಂಬಿದ್ದು ದುರಸ್ಥಿಯ ಸ್ಥಿತಿಯಲ್ಲಿವೆ. ನಗರೀಕರಣದಿಂದ ಈ ಪ್ರದೇಶಗಳ ಮೇಲಿನ ಒತ್ತಡವು ದ್ವಿಗುಣಗೊಳ್ಳುತ್ತಲೇ ಇವೆ.

ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ peri-urban ಪ್ರದೇಶಗಳಲ್ಲಿನ Commons ಗಳನ್ನೂ ಉಳಿಸಿಕೊಳ್ಳುವುದು ಮತ್ತು ಅಲ್ಲಿನ ಜೈವಿಕ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವಲ್ಲಿ ಸಮುದಾಯಗಳು ಮತ್ತು ಮಕ್ಕಳ ಪಾತ್ರ ಬಹಳ ಮುಖ್ಯ. ಅವರಿಗೆ ಇವುಗಳ ಮಹತ್ವದ ಬಗ್ಗೆ ಶಿಕ್ಷಣ ಮತ್ತು ಅರಿವು ಮೂಡಿಸುವುದು ಬಹಳ ಸೂಕ್ತ. ಆ ನಿಟ್ಟಿನಲ್ಲಿ Wildlife Conservation Group (WCG) ಮತ್ತು ರಾಮಕೃಷ್ಣ ಮಿಷನ್, ಶಿವನಹಳ್ಳಿ ಬಹಳಷ್ಟು ಕೆಲಸಗಳನ್ನು ಮಾಡಿದೆ ಮತ್ತು ಮಾಡುತ್ತಿದೆ.

ಈ ಯೋಜನೆಯ ಮೂಲ ಉದ್ದೇಶವು ಕಾಮನ್ಸ್ ಗಳ ಪ್ರದೇಶದಲ್ಲಿನ ವಿವಿಧ ಸಂಪನ್ಮೂಲಗಳ ನಕ್ಷೆಗಳನ್ನು ರಚಿಸುವುದು. ಮಕ್ಕಳು, ಯುವಕರು ಮತ್ತು ಇತರ ಸ್ಥಳೀಯರಲ್ಲಿ ಅರಿವನ್ನು ಬೆಳೆಸುವ ಮೂಲಕ ಕಾಮನ್ಸ್ ಗಳ ಬಗ್ಗೆ ಮೆಚ್ಚುಗೆಯನ್ನು ಬೆಳೆಸುವುದು. ತಮ್ಮ ಸ್ಥಳೀಯ ಜೀವವೈವಿಧ್ಯದೊಂದಿಗೆ ಮರುಸಂಪರ್ಕಿಸಲು ಮತ್ತು ಕಾಮನ್ಸ್ ಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು. ಈ ಪ್ರಮುಖ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರವನ್ನು ತೆಗೆದುಕೊಳ್ಳಲು ಸ್ಥಳೀಯ ಸಮುದಾಯವನ್ನು ಸಶಕ್ತಗೊಳಿಸಲು ಪ್ರಯತ್ನಿಸುವುದು.

By Wildlife Conservation Group (WCG) and Ramakrishna Mission, Shivanahalli

Project Start Date:
April 2023

 

Contact:
wcg.bnp@gmail.com 

Social Media handles:
Facebook: @WCGBangalore
Instagram: @wildlife_conservation_group
Twitter: @WCGIndia
Website: www.indiawcg.org